ಮದುವೆ ಮನೆ 2011 ರ ಕನ್ನಡ ಭಾಷೆಯ ಚಿತ್ರವಾಗಿದ್ದು, ರೊಮ್ಯಾಂಟಿಕ್ ಹಾಸ್ಯ ಪ್ರಕಾರದಲ್ಲಿ ಗಣೇಶ್ ಮತ್ತು ಶ್ರದ್ಧಾ ಆರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸುನಿಲ್ ಕುಮಾರ್ ಸಿಂಗ್ ನಿರ್ದೇಶಿಸಿದ್ದು ಜೆಜೆ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಎಚ್. ಎ. ರೆಹಮಾನ್ ನಿರ್ಮಿಸಿದ್ದಾರೆ. ಚಿತ್ರದ ಸಂಗೀತವನ್ನು ಮಣಿಕಾಂತ್ ಕದ್ರಿ ಸಂಯೋಜಿಸಿದ್ದಾರೆ. == ಪಾತ್ರವರ್ಗ == ಸೂರಜ್ ಪಾತ್ರದಲ್ಲಿ ಗಣೇಶ್ ಸುಮಾ ಪಾತ್ರದಲ್ಲಿ ಶ್ರದ್ಧಾ ಆರ್ಯ ತಬಲಾ ನಾಣಿ ಶರಣ್ ಅವಿನಾಶ್ ನರಸಿಂಹರಾಜು ಸ್ಪೂರ್ತಿ == ಕಥಾವಸ್ತು == ಸೂರಜ್ ( ಗಣೇಶ್ ), ತಮಾಷೆಯ, ಮಾತನಾಡುವ, ಕಿರಿಕಿರಿಯುಂಟುಮಾಡುವ ಪಾತ್ರ, ರೈಲಿನಲ್ಲಿ ಸುಮಾ ( ಶ್ರದ್ಧಾ ಆರ್ಯ ) ಗೆ ಭೇಟಿಯಾಗುತ್ತಾನೆ. ಭಯೋತ್ಪಾದಕರ ವಿರುದ್ಧ ವ್ಯವಹರಿಸುವುದರಲ್ಲಿ ಪರಿಣತಿ ಹೊಂದಿರುವ ದುಶ್ಯಂತನನ್ನು ಅವಳು ಮದುವೆಯಾಗಲಿದ್ದಾಳೆ. ರೈಲಿನಲ್ಲಿ ಪ್ರಯಾಣದ ಉದ್ದಕ್ಕೂ, ಸೂರಜ್ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ಅವಳ ಮದುವೆಗೆ ಆಹ್ವಾನವನ್ನು ಪಡೆಯುತ್ತಾನೆ. ಸಿನಿಮಾ ಮುಗಿಯುವ ಮುನ್ನ ಆ ದುಷ್ಯಂತ್ ದುಷ್ಟನೆಂದು ಸೂರಜ್ ತೋರಿಸಿಕೊಡುತ್ತಾನೆ. ಸುಮಾ ಮತ್ತು ಸೂರಜ್ ಒಂದಾಗುತ್ತಾರೆ. == ತಯಾರಿಕೆ == ಈ ಚಿತ್ರ ಹಿಂದಿಯ ಬ್ಲಾಕ್‌ಬಸ್ಟರ್ ಚಿತ್ರ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆಯ ರಿಮೇಕ್ ಎಂದು ಈ ಹಿಂದೆ ವದಂತಿಗಳಿದ್ದವು. ಆದರೆ, ಚಿತ್ರತಂಡ ಈ ವದಂತಿಗಳನ್ನು ತಳ್ಳಿಹಾಕಿದೆ ಮತ್ತು ಚಿತ್ರವು ಆಧುನಿಕ ಕಾಲದಲ್ಲಿ ರಾಮಾಯಣದ ರೂಪಾಂತರವಾಗಿದೆ ಎಂದು ಹೇಳಿದೆ. == ವಿಮರ್ಶೆಗಳು ಮತ್ತು ಗಲ್ಲಾಪೆಟ್ಟಿಗೆ ಗಳಿಕೆ == ಚಿತ್ರವು ವಿಮರ್ಶಕರಿಂದ ಸರಾಸರಿ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. == ಧ್ವನಿಮುದ್ರಿಕೆ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ